ಕುತೂಹಲ ಮೂಡಿಸಿದ ಪ್ರಶಾಂತ್‌ ಕಿಶೋರ್‌-ಕೆಸಿಆರ್‌ ಭೇಟಿ; ರಾಜ್ಯಸಭೆಗೆ ಪ್ರಕಾಶ್‌ ರೈ?

ರಾಜಕೀಯ ರಣತಂತ್ರಗಾರ ಪ್ರಶಾಂತ್‌ ಕಿಶೋರ್‌ ಹಾಗೂ ಬಹುಭಾಷಾ ನಟ ಪ್ರಕಾಶ್‌ ರೈ ತೆಲಂಗಾಣ ಮುಖ್ಯಮಂತ್ರಿ ಮತ್ತು ಟಿಆರ್‌ಎಸ್‌ ಪಕ್ಷದ ವರಿಷ್ಠ ಕೆ. ಚಂದ್ರಶೇಖರ್‌ ರಾವ್‌ ಅವರನ್ನು ಭೇಟಿಯಾಗಿ ಚರ್ಚೆ ನಡೆಸಿದ್ದು ಭಾರೀ ಕುತೂಹಲ ಮೂಡಿಸಿದೆ.

ಕುತೂಹಲ ಮೂಡಿಸಿದ ಪ್ರಶಾಂತ್‌ ಕಿಶೋರ್‌-ಕೆಸಿಆರ್‌ ಭೇಟಿ; ರಾಜ್ಯಸಭೆಗೆ ಪ್ರಕಾಶ್‌ ರೈ?
Linkup
ಹೈದರಾಬಾದ್‌: ರಾಜಕೀಯ ಕಾರ್ಯತಂತ್ರ ನಿಪುಣ ಹಾಗೂ ಬಹುಭಾಷಾ ನಟ (ರಾಜ್‌) ಅವರು ಮುಖ್ಯಮಂತ್ರಿ ಮತ್ತು ಟಿಆರ್‌ಎಸ್‌ ಪಕ್ಷದ ವರಿಷ್ಠ ಕೆ. ಚಂದ್ರಶೇಖರ್‌ ರಾವ್‌ ಅವರನ್ನು ಸೋಮವಾರ ಹೈದರಾಬಾದ್‌ನಲ್ಲಿ ಭೇಟಿಯಾಗಿ ಚರ್ಚೆ ನಡೆಸಿದ್ದಾರೆ. ಮುಂದಿನ ವರ್ಷ ತೆಲಂಗಾಣದಲ್ಲಿ ವಿಧಾನಸಭಾ ಚುನಾವಣೆ ನಡೆಯಲಿದೆ, ಜತೆಗೆ ಕೆಸಿಆರ್‌ ಅವರನ್ನು ಬಿಜೆಪಿ-ಕಾಂಗ್ರೆಸ್ಸೇತರ ತೃತೀಯರಂಗದ ನಾಯಕನಾಗಿ ಬಿಂಬಿಸುವ ಪ್ರಯತ್ನವೂ ನಡೆದಿದೆ. ಇದರ ಭಾಗವಾಗಿ ಇತ್ತೀಚೆಗೆ ಮಹಾರಾಷ್ಟ್ರ ಮುಖ್ಯಮಂತ್ರಿ ಉದ್ಧವ್‌ ಠಾಕ್ರೆ ಅವರೊಂದಿಗೆ ಕೆಸಿಆರ್‌ ಸಮಾಲೋಚನೆ ನಡೆಸಿದ್ದರು. ಇದರ ನಡುವೆಯೇ ಪ್ರಶಾಂತ್‌ ಕಿಶೋರ್‌-ಚಂದ್ರಶೇಖರ್‌ ಭೇಟಿಯು ಕುತೂಹಲ ಮೂಡಿಸಿದೆ. ಕೆ. ಚಂದ್ರಶೇಖರ್‌ ರಾವ್‌ ಅವರು ಪ್ರಶಾಂತ್‌ ಕಿಶೋರ್‌ ಅವರ ಜತೆ ಸಂಪರ್ಕದಲ್ಲಿದ್ದು, ಮುಂದಿನ ವರ್ಷ ಡಿಸೆಂಬರ್‌ನಲ್ಲಿ ನಡೆಯಲಿರುವ ಚುನಾವಣೆಯಲ್ಲಿ ತೆಲಂಗಾಣ ರಾಷ್ಟ್ರ ಸಮಿತಿ (ಟಿಆರ್‌ಎಸ್‌) ಪಕ್ಷದ ಚುನಾವಣಾ ತಂತ್ರಗಾರರನ್ನಾಗಿ ನೇಮಿಸಲಿದ್ದಾರೆ ಎಂದು ಹೇಳಲಾಗಿದೆ. ಈಗಾಗಲೇ ಪ್ರಶಾಂತ್‌ ಕಿಶೋರ್‌ ಅವರ ಐ-ಪ್ಯಾಕ್‌ ಟಿಆರ್‌ಎಸ್‌ ಪರ ಕೆಸಲ ಆರಂಭಿಸಿದೆ ಎಂಬ ವರದಿಗಳೂ ಇವೆ. ಆದರೆ, 'ಇಬ್ಬರ ನಡುವೆ ಇನ್ನೂ ಯಾವುದೇ ಒಪ್ಪಂದ ಏರ್ಪಟ್ಟಿಲ್ಲ. ಎಲ್ಲವೂ ಇನ್ನೂ ಚರ್ಚಾ ಹಂತದಲ್ಲಿದೆ' ಎಂದು ಟಿಆರ್‌ಎಸ್‌ನ ಮೂಲಗಳು ಸ್ಪಷ್ಟಪಡಿಸಿವೆ. ಪ್ರಶಾಂತ್‌ ಕಿಶೋರ್‌ ಅವರು ಈ ಮುನ್ನ ಆಂಧ್ರ ಪ್ರದೇಶ ಮುಖ್ಯಮಂತ್ರಿ ಜಗನ್‌ ಮೋಹನ್‌ ರೆಡ್ಡಿ, ಇತ್ತೀಚೆಗೆ ಪಶ್ಚಿಮ ಬಂಗಾಳ ಸಿಎಂ ಮಮತಾ ಬ್ಯಾನರ್ಜಿ, ತಮಿಳುನಾಡು ಮುಖ್ಯಮಂತ್ರಿ ಎಂ.ಕೆ. ಸ್ಟಾಲನ್‌ ಅವರ ಜತೆ ವಿಧಾನಸಭೆ ಚುನಾವಣೆಯಲ್ಲಿ ಕೆಲಸ ಮಾಡಿದ್ದರು. ಎರಡೂ ರಾಜ್ಯಗಳಲ್ಲೂ ಆಡಳಿತಾರೂಢ ಪಕ್ಷಗಳು ಭರ್ಜರಿ ಜಯಗಳಿಸಿದ್ದವು. ಪ್ರಕಾಶ್‌ ರಾಜ್‌ಗೆ ರಾಜ್ಯಸಭೆ ಸ್ಥಾನ? ವಿಶೇಷವೆಂದರೆ ಚಂದ್ರಶೇಖರ್‌ ರಾವ್‌ - ಪ್ರಶಾಂತ್‌ ಕಿಶೋರ್‌ ಭೇಟಿ ವೇಳೆ ಬಹುಭಾಷಾ ನಟ ಪ್ರಕಾಶ್‌ ರೈ ಕೂಡ ಉಪಸ್ಥಿತರಿದ್ದುದು ಭಾರೀ ಕುತೂಹಲ ಮೂಡಿಸಿದೆ. ಇಬ್ಬರೂ ಒಟ್ಟಾಗಿ ತೆಲಂಗಾಣ ಸರ್ಕಾರದ ಮಹತ್ವದ ಯೋಜನೆ ಕಾಳೇಶ್ವರಂಗೂ ಭೇಟಿ ನೀಡಿದ್ದು, ಫೋಟೋಗಳು ವೈರಲ್‌ ಆಗಿವೆ. ಇತ್ತೀಚೆಗೆ ಮುಂಬಯಿನಲ್ಲಿ ಕೆಸಿಆರ್‌-ಉದ್ಧವ್‌ ಠಾಕ್ರೆ-ಶರದ್‌ ಪವಾರ್‌ ಭೇಟಿ ವೇಳೆಯೂ ಪ್ರಕಾಶ್‌ ರೈ ಕಾಣಿಸಿಕೊಂಡಿದ್ದರು. ಮೂಲಗಳ ಪ್ರಕಾರ, ಬಿಜೆಪಿ ವಿರುದ್ಧ ಕಟು ಟೀಕೆಯಿಂದ ಜನಪ್ರಿಯರಾಗಿರುವ ಪ್ರಕಾಶ್‌ ರಾಜ್‌ ಅವರನ್ನು ರಾಷ್ಟ್ರೀಯ ಮಟ್ಟದಲ್ಲಿ ಟಿಆರ್‌ಎಸ್‌ನ ನಿಲುವನ್ನು ಎತ್ತಿ ಹಿಡಿಯಲು ಪಕ್ಷವು ರಾಜ್ಯಸಭೆಗೆ ನಾಮನಿರ್ದೇಶನ ಮಾಡುವ ಸಾಧ್ಯತೆಯಿದೆ ಎನ್ನಲಾಗಿದೆ. 2019ರ ಲೋಕಸಭೆ ಚುನಾವಣೆಯಲ್ಲಿ ಬೆಂಗಳೂರು ಕೇಂದ್ರ ಕ್ಷೇತ್ರದಿಂದ ಪಕ್ಷೇತರರಾಗಿ ಭಾರೀ ಹುಮ್ಮಸ್ಸಿನಿಂದ ಕಣಕ್ಕಿಳಿದಿದ್ದ ಪ್ರಕಾಶ್‌ ರೈ ಹೀನಾಯ ಸೋಲು ಕಂಡಿದ್ದರು. ಚಲಾವಣೆಯಾಗಿದ್ದ 11.97 ಲಕ್ಷ ಮತಗಳಲ್ಲಿ ಕೇವಲ 28 ಸಾವಿರ ಚಿಲ್ಲರೆ ಮತಗಳನ್ನು ಪಡೆದು ಸೋಲೊಪ್ಪಿಕೊಂಡಿದ್ದರು.