52 ವಾರಗಳ ಗರಿಷ್ಠ ಮಟ್ಟದ ಸಮೀಪದಲ್ಲಿರುವ ಟಾಪ್ 10 ಸ್ಮಾಲ್‌ಕ್ಯಾಪ್ ಷೇರುಗಳಿವು!

ನಿಫ್ಟಿ ಸ್ಮಾಲ್‌ಕ್ಯಾಪ್ 250 ಸೂಚ್ಯಂಕದಲ್ಲಿನ ಹಲವು ಷೇರುಗಳು ತಮ್ಮ 52 ವಾರಗಳ ಗರಿಷ್ಠ ಮಟ್ಟದಲ್ಲಿ ವಹಿವಾಟು ನಡೆಸುತ್ತಿವೆ ಅಥವಾ 52 ವಾರಗಳ ಗರಿಷ್ಠ ಮಟ್ಟವನ್ನು ಮುಟ್ಟಲು ಮುನ್ನುಗ್ಗುತ್ತಿವೆ.

52 ವಾರಗಳ ಗರಿಷ್ಠ ಮಟ್ಟದ ಸಮೀಪದಲ್ಲಿರುವ ಟಾಪ್ 10 ಸ್ಮಾಲ್‌ಕ್ಯಾಪ್ ಷೇರುಗಳಿವು!
Linkup
ಭಾರತೀಯ ಇಕ್ವಿಟಿ ಮಾರುಕಟ್ಟೆಯು ಅದರ ಇತ್ತೀಚಿನ ಇಂಟ್ರಾ ಡೇ ಕನಿಷ್ಠ 16,400ರ ಮಟ್ಟದಿಂದ ಶೇ. 10ರಷ್ಟು ಗಳಿಕೆ ದಾಖಲಿಸಿದ ನಂತರ ಇದೀಗ 18,200 ಮಟ್ಟದಲ್ಲಿ ಏಕೀಕರಣಗೊಂಡಿದೆ. ಒಟ್ಟಾರೆ ವಿಶಾಲ ಮಾರುಕಟ್ಟೆಯು ಮುಂಚೂಣಿ ಮಾರುಕಟ್ಟೆಗಿಂತ ಉತ್ತಮವಾಗಿ ಕಾರ್ಯನಿರ್ವಹಿಸಿದೆ. ಉದಾಹರಣೆಗೆ, ನಿಫ್ಟಿ ಸ್ಮಾಲ್‌ಕ್ಯಾಪ್ 250 ಸೂಚ್ಯಂಕವು ಇದೇ ಅವಧಿಯಲ್ಲಿ ಶೇ. 13ರಷ್ಟು ಗಳಿಕೆ ಕಂಡಿದೆ. ಇದು 9,200 ಅಂಕಗಳ ಮಟ್ಟದಿಂದ ಈಗಿನ 10,400ರ ಮಟ್ಟಕ್ಕೆ ಏರಿಕೆ ದಾಖಲಿಸಿದೆ. ಇಂದಿನ ವಹಿವಾಟಿನಲ್ಲಿ ನಿಫ್ಟಿ 50 ಸೂಚ್ಯಂಕವು 2 ಅಂಕಗಳ ಕುಸಿತದೊಂದಿಗೆ ಬಹುತೇಕ ಸಮತಟ್ಟಾಗಿ ವಹಿವಾಟು ಕೊನೆಗೊಳಿಸಿದರೆ, ಮಾತ್ರ ಶೇ. 0.69ರಷ್ಟು ಗಳಿಕೆ ದಾಖಲಿಸಿದೆ. ಸ್ಮಾಲ್‌ಕ್ಯಾಪ್ 250 ಸೂಚ್ಯಂಕದಲ್ಲಿ 136 ಷೇರುಗಳು ಹಸಿರು ಬಣ್ಣದಲ್ಲಿ ಅಂದರೆ ಗಳಿಕೆಯೊಂದಿಗೆ ದಿನದ ವಹಿವಾಟು ಕೊನೆಗೊಳಿಸಿದರೆ, 110 ನಷ್ಟದೊಂದಿಗೆ ಕೆಂಪು ಬಣ್ಣದಲ್ಲಿ ಕಾಣಿಸಿಕೊಂಡಿವೆ. ಇದೇ ವೇಳೆ ನಾಲ್ಕು ಷೇರುಗಳ ದರದಲ್ಲಿ ಯಾವುದೇ ಬದಲಾವಣೆ ದಾಖಲಾಗಿಲ್ಲ. ಈ ಸೂಚ್ಯಂಕದಲ್ಲಿನ ಹಲವು ಷೇರುಗಳು ತಮ್ಮ 52 ವಾರಗಳ ಗರಿಷ್ಠ ಮಟ್ಟದಲ್ಲಿ ವಹಿವಾಟು ನಡೆಸುತ್ತಿವೆ ಅಥವಾ 52 ವಾರಗಳ ಗರಿಷ್ಠ ಮಟ್ಟದ ಸಮೀಪದಲ್ಲಿವೆ. 52 ವಾರಗಳ ಗರಿಷ್ಠ ಮಟ್ಟಕ್ಕೆ ಸಮೀಪದಲ್ಲಿರುವ ಟಾಪ್ 10 ಷೇರುಗಳ ಪಟ್ಟಿಯನ್ನು ಕೆಳಗೆ ನೀಡಲಾಗಿದೆ.
ಕಂಪನಿ ಹೆಸರು ಎಲ್‌ಟಿಪಿ ವಾರ್ಷಿಕ ಗರಿಷ್ಠ ವಾರ್ಷಿಕ ಕನಿಷ್ಠ 365 ದಿನಗಳಲ್ಲಿ ಬದಲಾವಣೆ (%) ಉದ್ಯಮ ವಲಯ
ತನ್ಲಾ ಫ್ಲಾಟ್‌ಫಾರ್ಮ್ಸ್‌ ಲಿಮಿಟೆಡ್‌ 2065.95 2065.95 660 164.91 ಕಂಪ್ಯೂಟರ್‌ಗಳು - ಸಾಫ್ಟ್‌ವೇರ್‌
ಟ್ರೈಡೆಂಟ್‌ ಲಿಮಿಟೆಡ್‌ 64.8 64.8 12.7 330.31 ಜವಳಿ ಉತ್ಪನ್ನಗಳು
ಚಂಬಲ್‌ ಫರ್ಟಿಲೈಸರ್ಸ್‌ & ಕೆಮಿಕಲ್ಸ್‌ ಲಿಮಿಟೆಡ್‌ 468.55 470 200.35 94.44 ರಸಗೊಬ್ಬರಗಳು
ಸುಝ್ಲಾನ್‌ ಎನರ್ಜಿ ಲಿಮಿಟೆಡ್‌ 12.2 12.25 4.4 - ಎಲೆಕ್ಟ್ರಿಕಲ್‌ ಈಕ್ವಿಪ್‌ಮೆಂಟ್‌
ಗುಜರಾತ್‌ ಪೆಟ್ರೋಕೆಮಿಕಲ್ಸ್‌ ಲಿಮಿಟೆಡ್‌ 2792.5 2813.95 525.1 355.43
ವರ್ಧಮಾನ್‌ ಟೆಕ್ಸ್‌ಟೈಲ್ಸ್‌ ಲಿಮಿಟೆಡ್‌ 2683 2715.95 1011.35 146.64 ಜವಳಿ - ಹತ್ತಿ
ಗ್ರೈಂಡ್‌ವೆಲ್‌ ನಾರ್ಟನ್‌ ಲಿಮಿಟೆಡ್‌ 1950 1973.95 672 165.48 ಅಬ್ರಾಸಿವ್ಸ್‌
ಪ್ರಜ್‌ ಇಂಡಸ್ಟ್ರೀಸ್‌ ಲಿಮಿಟೆಡ್‌ 401.95 407 110 204.57 ಇಂಜಿನಿಯರಿಂಗ್‌
ಅಸಾಹಿ ಇಂಡಿಯಾ ಗ್ಲಾಸ್‌ ಲಿಮಿಟೆಡ್‌ 578 586 256.05 101.18 ಆಟೋಮೊಬೈಲ್‌ ಬಿಡಿಭಾಗಗಳು
ಜಾಮ್ನಾ ಆಟೋ ಇಂಡಸ್ಟ್ರೀಸ್‌ ಲಿಮಿಟೆಡ್‌ 120.8 122.6 58.45 69.77 ಆಟೋಮೊಬೈಲ್‌ ಬಿಡಿಭಾಗಗಳು
ಹೆಚ್ಚಿನ ವಿವರಗಳಿಗಾಗಿ ದಲಾಲ್ ಸ್ಟ್ರೀಟ್ ಇನ್ವೆಸ್ಟ್‌ಮೆಂಟ್ ಜರ್ನಲ್, ಭಾರತದ ನಂ.1 ಇಕ್ವಿಟಿ ರಿಸರ್ಚ್ ಮತ್ತು ಇನ್ವೆಸ್ಟ್‌ಮೆಂಟ್ ಮ್ಯಾಗಜೀನ್‌ಗೆ ಚಂದಾದಾರರಾಗಿ. ಅನ್ನು ಕ್ಲಿಕ್ ಮಾಡುವ ಮೂಲಕ ನೀವು ಚಂದಾದಾರರಾಗಬಹುದು. Disclaimer: This above is third party content and TIL hereby disclaims any and all warranties, express or implied, relating to the same. TIL does not guarantee, vouch for or endorse any of the above content or its accuracy nor is responsible for it in any manner whatsoever. The content does not constitute any investment advice or solicitation of any kind. Users are advised to check with certified experts before taking any investment decision and take all steps necessary to ascertain that any information and content provided is correct, updated and verified.