
ಬಹುತೇಕ ಸ್ಯಾನ್ ಫ್ರಾನ್ಸಿಸ್ಕೋದಲ್ಲಿ ಬಹುತೇಕ ಶೂಟಿಂಗ್ ಆಗಿದ್ದ 'ಅಮೆರಿಕ ಅಮೆರಿಕ' ಸಿನಿಮಾಕ್ಕೆ ಇಂದು 25 ವರ್ಷಗಳ ಸಂಭ್ರಮ. ಈ ಸಿನಿಮಾಕ್ಕೆ ಉತ್ತಮ ಕನ್ನಡ ಸಿನಿಮಾ ಎಂದು ರಾಷ್ಟ್ರ ಪ್ರಶಸ್ತಿ ಕೂಡ ಸಿಕ್ಕಿತ್ತು. ಸಿನಿಮಾ ರಿಲೀಸ್ ಆಗಿ ಎರಡು ತಿಂಗಳಲ್ಲಿ ಈ ಚಿತ್ರವು ಕೋಟಿ ಕೋಟಿ ಹಣ ಗಳಿಸಿತ್ತು. 1995ರಲ್ಲಿ ಈ ಸಿನಿಮಾ ರಿಲೀಸ್ ಆಗಿತ್ತು. 1997ರಲ್ಲಿ ಮತ್ತೆ ಈ ಚಿತ್ರ ರೀ ರಿಲೀಸ್ ಆಗಿತ್ತು.
ಹಾಗು ಈ ಸಿನಿಮಾ ನಿರ್ದೇಶಕ ಹಾಗೂ , ಅಕ್ಷಯ್ ಆನಂದ್, ಎಚ್ಜಿ ದತ್ತಾತ್ರೇಯ, ವೈಶಾಲಿ ಕಾಸರವಳ್ಳಿ, ಸಿಆರ್ ಸಿಂಹ, ಶಿವರಾಮ್ ಮುಂತಾದವರು ಈ ಸಿನಿಮಾದಲ್ಲಿ ನಟಿಸಿದ್ದರು.
ಹೇಮಾ ಪ್ರಭಾತ್ ಹೇಳಿದ್ದೇನು?
" 16-06-1996 ಅಮೆರಿಕ ಅಮೆರಿಕ ನಮ್ಮ ಚಲನಚಿತ್ರದ ಮಹೂರ್ತದ ಸುದಿನ. ಇಂದು 25 ವರ್ಷ ತುಂಬಿದೆ. ನಿರ್ದೇಶಕರಿಗೆ, ನಿರ್ಮಾಪಕರಿಗೆ, ವಿತರಕರಿಗೆ, ತಂತ್ರಜ್ಞಾನರಿಗೆ, ಕಲಾವಿದರಿಗೆ ನಮ್ಮ ಚಿತ್ರದ ರಜತ ಮಹೋತ್ಸವದ ಶುಭಾಶಯಗಳು. ಇಂತ ಅದ್ಭುತ ಚಿತ್ರದಲ್ಲಿ ಅಭಿನಯಿಸಲು ಅವಕಾಶ ಕೊಟ್ಟ ದತ್ತಣ್ಣ, ನಾಗತೀಹಳ್ಳಿ ಚಂದ್ರಶೇಖರ್, ನಂದಕುಮಾರ್ ಅವರಿಗೆ ನಾನು ಚಿರಋಣಿ. ಚಿತ್ರದಲ್ಲಿ ನಟಿಸಲು ಪ್ರೋತ್ಸಾಹಿಸಿದ ನನ್ನ ತಂದೆ ತಾಯಿ ಹಾಗೂ ಚಿತ್ರವನ್ನೂ ನೋಡಿ 25ವರ್ಷಗಳಾದರೂ ಇಂದಿಗೂ ನನ್ನನ್ನು ಭೂಮಿಕಾ ಎಂದು ಪ್ರೀತಿಯಿಂದ ಗುರುತಿಸುವ ಕಲಾರಸಿಕರಾದ ನಿಮಗೆ ನನ್ನ ಧನ್ಯವಾದಗಳು" ಎಂದು ನಟಿ ಹೇಮಾ ಅವರು ಸೋಶಿಯಲ್ ಮೀಡಿಯಾ ಪೋಸ್ಟ್ ಹಾಕಿಕೊಂಡಿದ್ದಾರೆ.
ವಿಶೇಷ ಫೋಟೋ, ವಿಡಿಯೋ ಹಂಚಿಕೊಂಡ ರಮೇಶ್ ಅರವಿಂದ್, ನಾಗತೀಹಳ್ಳಿ ಚಂದ್ರಶೇಖರ್
ನಟ ರಮೇಶ್ ಅರವಿಂದ್ ಅವರು ಕೂಡ 'ಅಮೆರಿಕ ಅಮೆರಿಕ' ಸಿನಿಮಾದ ಮುಹೂರ್ತದ ಫೋಟೋವನ್ನು ಸೋಶಿಯಲ್ ಮೀಡಿಯಾದಲ್ಲಿ ಹಂಚಿಕೊಂಡಿದ್ದಾರೆ. ನಾಗತೀಹಳ್ಳಿ ಚಂದ್ರಶೇಖರ್ ಕೂಡ ಸೋಶಿಯಲ್ ಮೀಡಿಯಾದಲ್ಲಿ 'ಅಮೆರಿಕ ಅಮೆರಿಕ' ಸಿನಿಮಾದ ವಿಡಿಯೋ ಹಂಚಿಕೊಂಡು, "25 ವರ್ಷದ ಮಧುರನೆನಪು. ಕಾಲು ಶತಮಾನದಾದ್ಯಂತ ಕೃತಜ್ಞತೆಗಳು" ಎಂದು ಹೇಳಿದ್ದಾರೆ.
ಈ ಸಿನಿಮಾದ ಹಾಡುಗಳು ತುಂಬ ಫೇಮಸ್
ಈ ಸಿನಿಮಾದ ಹಾಡುಗಳೆಲ್ಲವೂ ಸೂಪರ್ ಹಿಟ್ ಆಗಿದ್ದವು. 'ನೂರು ಜನ್ಮಕೂ..', 'ಯಾವ ಮೋಹನ ಮುರಳಿ ಕರೆಯಿತೋ' ಹಾಡು ಯಾರು ಕೇಳಿಲ್ಲ ಹೇಳಿ? 'ಅಮೆರಿಕ ಅಮೆರಿಕ' ಸಿನಿಮಾದ ಮೂಲಕ ವಿ ಮನೋಮೂರ್ತಿ ಅವರು ಸಂಗೀತ ನಿರ್ದೇಶಕ ಹುದ್ದೆಗೆ ಏರಿದರು.